News & Events
Astrologer Vishnu Prasad Hebbar visited Sri Madhur Temple
28-11-2024Madhur, 28 November 2024: Founder of Parampara Vidyapeetam, The Bekal Gokulam Goshala and well known Astrologer Sri Vishnu Prasad Hebbar visited Madhur Sri Madanantheshwara Siddhivinayaka Temple today.
Madhur Temple Brahmakalashotsava Silver Kalasha Coupon Released
21-11-2024ಮಧೂರು, 21 ನವೆಂಬರ್ 2024: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಆ ಪ್ರಯುಕ್ತ ರಜತ ಕಲಶ ಕೂಪನ್ ಬಿಡುಗಡೆ ಸಮಾರಂಭವು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಎಸ್. ರಾವ್ ಅವರ ಅಧ್ಯಕ್ಷತೆಯಲ್ಲಿ ಇಂದು ಜರಗಿತು. ಶ್ರೀ ದೇವರ ಸನ್ನಿಧಿಯಲ್ಲಿ ಜರಗಿದ ಸಮಾರಂಭದಲ್ಲಿ ರಜತ ಕಲಶದ ಕೂಪನ್ ಬಿಡುಗಡೆ
ಬೆಂಗಳೂರು ಭಕ್ತರ ಆನ್ ಲೈನ್ ಸಭೆ 21-11-2024
19-11-2024ಆತ್ಮೀಯರೇ, ಕುಂಬಳೆ ಸೀಮೆಯ ಪ್ರಧಾನ ದೇವಸ್ಥಾನಗಳಲ್ಲೊಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯನ್ನು ದಿನಾಂಕ 27 ಮಾರ್ಚ್ 2025ರಿಂದ 7 ಏಪ್ರಿಲ್ 2025ರವರೆಗೆ ನಡೆಸಲು ನಿಶ್ಚಯಿಸಿರುವುದು ತಮಗೆಲ್ಲರಿಗೂ ಈಗಾಗಲೇ ತಿಳಿದ ವಿಚಾರ. ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಬೆಂಗಳೂರು ಮಹಾನಗರ ಮತ್ತು ಇಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಆಸ್ತಿಕರ ಪಾತ್ರವೂ ಬಹಳ ಮಹತ್ವದ್ದು. ಆ ದೃಷ್ಟಿಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಜಿಲ್ಲೆಯ ಭಕ್ತರ ಆನ್ ಲೈನ್ ಸಭೆಯನ್ನು ನಡೆಸಲು
ಮುಗು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ
03-11-2024ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 27 ಮಾರ್ಚ್ 2025ರಿಂದ 7 ಏಪ್ರಿಲ್ 2025ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಯಶಸ್ವಿಗೊಳಿಸುವ ಸಂಬಂಧವಾಗಿ ಪುತ್ತಿಗೆ ಗ್ರಾಮ ಪಂಚಾಯತಿನ ಮುಗು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದಿನಾಂಕ 3-11-2024ರಂದು ನಡೆದ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ
Launch of Madhur Temple’s Website
03-11-2024ಮಧೂರು, 3 ನವೆಂಬರ್ 2024: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು ಇದರ ವೆಬ್ ಸೈಟ್ www.madhurtemple.in ನ್ನು ಖ್ಯಾತ ಉದ್ಯಮಿ, ಕೊಡುಗೈ ದಾನಿ ಮಹಾಬಲೇಶ್ವರ ಭಟ್ ಎಡಕ್ಕಾನ ಅವರು ಇಂದು ಶ್ರೀ ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇವಸ್ಥಾನದ ಜಾಲತಾಣದ ಮಹತ್ವವನ್ನು ವಿವರಿಸಿ, ಇಂದಿನ ಆಧುನಿಕ ಯುಗದಲ್ಲಿ ವಿಶ್ವದ ಎಲ್ಲಾ ಭಕ್ತರಿಗೂ ಅಂಗೈಯಲ್ಲೇ ದೇವಸ್ಥಾನ ಕುರಿತು ಮಾಹಿತಿ ಸಿಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಜಾಲತಾಣದಲ್ಲಿ ನಾಡಿನ ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ