Welcome to Sri Madanantheshwara Siddhivinayaka Temple

ಕಾಸರಗೋಡು ನಗರದಿಂದ ಏಳು ಕಿಲೋಮೀಟರು ಈಶಾನ್ಯಕ್ಕೆ ಮಧೂರು ಗ್ರಾಮವಿದೆ. ಸುತ್ತಲೂ ಅನತಿ ದೂರದಲ್ಲಿ ಎತ್ತರವಾದ ಗುಡ್ಡಗಳು, ಅದರ ತಪ್ಪಲಲ್ಲಿ ಫಲಭಾರದಿಂದ ಬಾಗುವ ತೆಂಗು – ಕಂಗು – ಬಾಳೆಯ ತೋಟ. ಸದಾ ಹಸುರಾಗಿ ಕಂಗೊಳಿಸುವ ಬಯಲಿನ ಮಧ್ಯದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಕಲಕಲ ನಾದದಿಂದ ಹರಿಯುವ ಮಧುವಾಹಿನೀ ನದಿ. ನದಿಯ ದಡದಲ್ಲಿ ಪೂರ್ವಾಭಿಮುಖವಾಗಿ ಶೋಭಿಸುವ ಗಜಪೃಷ್ಠಾಕಾರದ ಮೂರು ಅಂತಸ್ತಿನ ಶ್ರೀ ಮದನಂತೇಶ್ವರ ವಿನಾಯಕ ಬೃಹನ್ಮಂದಿರ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಮತ್ತು ಕೆಳಗಿನ ಅಂತಸ್ತಿಗೆ ಹಂಚಿನ ಹೊದಿಕೆ. ವಿವಿಧ ಕೆತ್ತನೆಯ ಕೆಲಸಗಳೊಂದಿಗೆ ಸುತ್ತಲೂ ಗೋಪುರ – ಉಪದೇವಾಲಯಗಳಿಂದ ಕೂಡಿ ಭಕ್ತಜನರ ಕಣ್ಮನಗಳಿಗೆ  ಸಂತೋಷವನ್ನುಂಟುಮಾಡುತ್ತದೆ.

Timing

Timings

Discover accurate temple opening and closing times.

Know More
Seva Details

Seva Details

Find detailed information about temple services and rituals.

Know More
History

Sree Madanantheshwara Siddhivinayaka Temple

ॐ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ॐ ಪುರಾಣ ಪ್ರಸಿದ್ಧ ಮಧೂರು ದೇವಾಲಯ          ‘ದೇವರ ಸ್ವಂತ ನಾಡು’ ಎಂದೇ ಖ್ಯಾತವಾಗಿರುವ ಕೇರಳ ರಾಜ್ಯದ ಉತ್ತರದಲ್ಲಿನ ಸುಂದರ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಿಲ್ಲೆ ಕಾಸರಗೋಡು. ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನವು ಅತಿ ಪುರಾತನವೂ, ಪ್ರಸಿದ್ಧವೂ ಆಗಿರುವ ಕಾರಣಿಕ ಕ್ಷೇತ್ರವಾಗಿದೆ. ಮಾಯಿಪ್ಪಾಡಿ ಅರಮನೆಯ ರಾಜರು ಈ ದೇವಾಲಯದ ಆನುವಂಶಿಕ ಮೊಕ್ತೇಸರರಾಗಿರುವರು.   ಪೌರಾಣಿಕ ಹಿನ್ನೆಲೆ          ಈ

Know More