ಮುಂಬಯಿ 22-12-2024:

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಮುಂಬೈ ಘಟಕದ ಸಮಿತಿ ರೂಪೀಕರಣ ಸಭೆಯು 21-12-2024 ರಂದು ಮುಂಬೈಯ ಕುರ್ಲಾದಲ್ಲಿರುವ ಬಂಟರ ಭವನದಲ್ಲಿ ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷರು ಹಾಗೂ ಮಹಾದಾನಿಗಳಾದ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರ ಅಧ್ಯಕ್ಷತೆಯಲ್ಲಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ದಾನಿಗಳಾದ ಶ್ರೀ ಬಿ ಕೆ ಮಧೂರು, ಶ್ರೀ ಕೆ ಕೆ ಶೆಟ್ಟಿ, ಸಂಜೀವ ಶೆಟ್ಟಿ ತಿಂಬರೆ, ಶ್ರೀ ಆರ್ ಕೆ ಶೆಟ್ಟಿ, ಶ್ರೀಮತಿ ಕಲ್ಪನಾ ಕೃಷ್ಣ ಶೆಟ್ಟಿ, ಶ್ರೀ ರಾಜೇಶ್ ಶೆಟ್ಟಿ, ಶ್ರೀ ಬಾಬು ಬೆಳ್ಚಡ ಹಾಗೂ ಮಧೂರು ಬ್ರಹ್ಮಕಲಶೋತ್ಸವ ಸಮಿತಿಯ ಶ್ರೀ ಮಂಜುನಾಥ ಕಾಮತ್, ಶ್ರೀ ಜಯದೇವ ಖಂಡಿಗೆ ಇವರುಗಳ ಉಪಸ್ಥಿತಿಯಲ್ಲಿ ನಡೆಯಿತು. ಮುಂಬಯಿ ಹಾಗೂ ಮಹಾರಾಷ್ಟ್ರದ ಇತರ ಭಾಗಗಳ ಮಧೂರು ಕ್ಷೇತ್ರದ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾದಾನಿ, ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, “ಮಧೂರು ದೇವಳದ ಪುನರ್ನಿರ್ಮಾಣ ಕಾರ್ಯ ದಶಕಕ್ಕೂ ಧೀರ್ಘ ಕಾಲ ನಡೆಯಿತು. ಇದೊಂದು ಗಜ ನಡಿಗೆ. ಆದರೆ ಗಜದಂತೆ ಗಾಂಭೀರ್ಯದಲ್ಲಿ ದೇವಳ ಎದ್ದು ನಿಂತಿದೆ. ಇನ್ನು ಬ್ರಹ್ಮ ಕಲಶದ ಮಹಾಕಾರ್ಯವನ್ನೂ ಸಿದ್ಧಿವಿನಾಯಕ ನಮ್ಮನ್ನು ನಿಮಿತ್ತವಾಗಿರಿಸಿಕೊಂಡು ನಡೆಸಿಕೊಡುತ್ತಾನೆ” ಎಂದರು.

ಉದ್ಯಮಿ ದಾನಿ, ಮುಂಬಯಿ ಸಮಿತಿ ಅಧ್ಯಕ್ಷ ಬಿ. ಕೆ ಮಧೂರು ಮಾತನಾಡುತ್ತಾ “ಮಧೂರು ದೇವರು ಭಕ್ತಿಯಿಂದ ಬೇಡಿದ್ದೆಲ್ಲವನ್ನೂ ನಡೆಸಿ ಕೊಡುವ ಇಷ್ಟಾರ್ಥ ಸಿದ್ದಿ ದೇವರು, ನಾವು ಅಂತಃಕರಣದಿಂದ ಕೆಲಸ ಮಾಡಿ ಈ ಮಹಾಕಾರ್ಯದಲ್ಲಿ ಸೇರಿಕೊಳ್ಳೋಣ, ನಿಮ್ಮೆಲ್ಲರ ಸಹಕಾರ ನನಗಿರಲಿ” ಎಂದರು.

ವೇದಿಕೆಯಲ್ಲಿ ಗಣ್ಯರಾದ ಕೆ ಕೆ ಶೆಟ್ಟಿ, ಆರ್ ಕೆ ಶೆಟ್ಟಿ, ಸಂಜೀವ ಶೆಟ್ಟಿ, ಕಲ್ಪನಾ ಶೆಟ್ಟಿ ಮಾತನಾಡಿ ಮಾರ್ಚ್‌ 26 ರಿಂದ ಏಪ್ರೀಲ್ 7 ರ ವರೆಗೆ ನಡೆವ ಸಂಭ್ರಮದ ಬ್ರಹ್ಮ ಕಲಶೋತ್ಸವದ ಯಶಸ್ಸಿಗೆ ಏಕಮನಸ್ಸಿನಿಂದ ಕೆಲಸ ಮಾಡಬೇಕೆಂದು ನುಡಿದರು. ಮಧೂರು ಕ್ಷೇತ್ರದ ಪರವಾಗಿ ಸಮಿತಿಯ ಕಾರ್ತಿಕ್ ಶೆಟ್ಟಿ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ಶ್ರೀ ಕಳ್ಳಿಗೆ ದಯಾಸಾಗರ ಚೌಟ ಸ್ವಾಗತ ಹಾಗೂ ಪ್ರಸ್ತಾವಿಕದೊಂದಿಗೆ ಸಮನ್ವಯಗೈದರು. ಶ್ರೀ ಮಂಜುನಾಥ ಕಾಮತ್ ಧನ್ಯವಾದವನ್ನಿತ್ತರು. ಶ್ರೀ ಕರ್ನೂರು ಮೋಹನ್ ರೈ ನಿರೂಪಿಸಿದರು. ಇಂದು ನಡೆದ ಸಭೆಯಲ್ಲಿ ಮುಂಬೈ ಸಮಿತಿಯನ್ನು ರೂಪೀಕರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರುಗಳಾಗಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ, ಶ್ರೀ ಶಶಿಕಿರಣ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ಹಾಗೂ ಅಧ್ಯಕ್ಷರಾಗಿ ಶ್ರೀ ಬಿ ಕೆ ಮಧೂರು ನಿಯುಕ್ತರಾದರು.

ಕಾರ್ಯಧ್ಯಕ್ಷರುಗಳಾಗಿ ಶ್ರೀ ಕೆ ಕೆ ಶೆಟ್ಟಿ, ಆರ್ ಕೆ ಶೆಟ್ಟಿ, ಕೆ ಡಿ ಶೆಟ್ಟಿ ಹಾಗೂ ಶ್ರೀ ಸಂಜೀವ ಶೆಟ್ಟಿ ತಿಂಬರ ಮತ್ತು ಕೆಪಿ ರೈ ಉಪಾಧ್ಯಕ್ಷರುಗಳಾಗಿ ಶ್ರೀ ಬಾಬು ಬೆಳ್ಚಡ, ಶ್ರೀ ಮೋಹನ್ ಶೆಟ್ಟಿ ಮಜ್ಜಾರ್, ಶ್ರೀ ರಘುನಾಥ್ ರೈ, ಬಿ ಎಂ ಆಳ್ವ ಇವರನ್ನು ನೇಮಿಸಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಕಳ್ಳಿಗೆ ದಯಾಸಾಗರ ಚೌಟ ನಿಯುಕ್ತಿಯಾದರು. ಕಾರ್ಯದರ್ಶಿಗಳಾಗಿ ಶ್ರೀ ರಾಜೇಶ್ ಶೆಟ್ಟಿ ಜತೆ ಕಾರ್ಯದರ್ಶಿಯಾಗಿ ಹರೀಶ್ ಚೇವಾರ್ ಹಾಗೂ ಕೋಶಾಧಿಕಾರಿಯಾಗಿ ಶ್ರೀ ಸೀತಾರಾಮ ಶೆಟ್ಟಿ ಮಹಿಳಾ ವಿಭಾಗದ ಸಂಚಾಲಕಿಯಾಗಿ ಶ್ರೀಮತಿ ಕಲ್ಪನಾ ಶೆಟ್ಟಿ ಹಾಗೂ ಜತೆ ಸಂಚಾಲಕಿಯರಾಗಿ ರೇವತಿ ಶೆಟ್ಟಿ, ಉಷಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾಗಿ ಶ್ರೀ ಮೋಹನ್ ರೈ ಆಯ್ಕೆಯಾದರು. ಭಾಗವಹಿಸಿದ ಎಲ್ಲರನ್ನೂ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರಾಗಿ ಸರ್ವಾನುಮತದಿಂದ ಆರಿಸಲಾಯಿತು.

 

Loading