ಮಧೂರು, 1-12-2024: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಳೆದ ಹಲವು ವರ್ಷಗಳಿಂದ ಶ್ರೀ ದೇವರ ಪ್ರಸಾದ ವಿತರಣಾ ವಿಭಾಗದಲ್ಲಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತಿದ್ದ ಮುಟ್ಟತೋಡಿ ಶ್ರೀ ಪರಮೇಶ್ವರ ಅಡಿಗ ಅವರು ತಮ್ಮ ಹುದ್ದೆಯಿಂದ ಸೇವಾ ನಿವೃತ್ತಿ ಹೊಂದಿದ್ದಾರೆ. ಅವರಿಗೆ ಶ್ರೀ ಮಧೂರು ದೇಗುಲದ ಸಮಸ್ತ ನೌಕರರ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ದೇಗುಲ ಪರಿಸರದಲ್ಲಿ ನಡೆದ ಸರಳ ಸಮಾರಂಭದಲ್ಲಿ ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಟಿ. ರಾಜೇಶ್ ಆವರು ಫಲಕ, ಶಾಲು, ಫಲ ವಸ್ತುಗಳನ್ನು ನೀಡಿ ಗೌರವಿಸಿದರು. ಪ್ರಧಾನ ಅರ್ಚಕರಾದ ಶ್ರೀ ಶ್ರೀಕೃಷ್ಣ ಉಪಾಧ್ಯಾಯ ಹಾಗೂ ಅವರ ಧರ್ಮಪತ್ನಿ ಅವರು ಈ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನ ನೀಡಿ ಹರಸಿದರು.

Loading