ಬೆಂಗಳೂರು ಭಕ್ತರ ಆನ್ ಲೈನ್ ಸಭೆ 21-11-2024
ಆತ್ಮೀಯರೇ, ಕುಂಬಳೆ ಸೀಮೆಯ ಪ್ರಧಾನ ದೇವಸ್ಥಾನಗಳಲ್ಲೊಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯನ್ನು ದಿನಾಂಕ 27 ಮಾರ್ಚ್ 2025ರಿಂದ 7 ಏಪ್ರಿಲ್ 2025ರವರೆಗೆ ನಡೆಸಲು ನಿಶ್ಚಯಿಸಿರುವುದು ತಮಗೆಲ್ಲರಿಗೂ ಈಗಾಗಲೇ ತಿಳಿದ ವಿಚಾರ.
ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಬೆಂಗಳೂರು ಮಹಾನಗರ ಮತ್ತು ಇಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಆಸ್ತಿಕರ ಪಾತ್ರವೂ ಬಹಳ ಮಹತ್ವದ್ದು. ಆ ದೃಷ್ಟಿಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಜಿಲ್ಲೆಯ ಭಕ್ತರ ಆನ್ ಲೈನ್ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದ್ದು ಎಲ್ಲಾ ಆಸ್ತಿಕ ಬಂಧುಗಳು ತಪ್ಪದೇ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ದಿನಾಂಕ: 21-11-2024, ಗುರುವಾರ
ಸಮಯ: ರಾತ್ರಿ 8.00 ಗಂಟೆ
ಗೂಗಲ್ ಮೀಟ್ ಲಿಂಕ್: meet.google.com/xoa-tdqt-kyt
ಬ್ರಹ್ಮಕಲಹ್ಸೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಮಂಜುನಾಥ್ ಕಾಮತ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಯದೇವ ಖಂಡಿಗೆ ಅವರು ಭಾಗವಹಿಸಲಿದ್ದಾರೆ.
ಸಂಪರ್ಕ ಸಂಖ್ಯೆ: +91 99002 35555, +91 98454 63842