Launch of Madhur Temple’s Website
ಮಧೂರು, 3 ನವೆಂಬರ್ 2024:
ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು ಇದರ ವೆಬ್ ಸೈಟ್ www.madhurtemple.in ನ್ನು ಖ್ಯಾತ ಉದ್ಯಮಿ, ಕೊಡುಗೈ ದಾನಿ ಮಹಾಬಲೇಶ್ವರ ಭಟ್ ಎಡಕ್ಕಾನ ಅವರು ಇಂದು ಶ್ರೀ ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇವಸ್ಥಾನದ ಜಾಲತಾಣದ ಮಹತ್ವವನ್ನು ವಿವರಿಸಿ, ಇಂದಿನ ಆಧುನಿಕ ಯುಗದಲ್ಲಿ ವಿಶ್ವದ ಎಲ್ಲಾ ಭಕ್ತರಿಗೂ ಅಂಗೈಯಲ್ಲೇ ದೇವಸ್ಥಾನ ಕುರಿತು ಮಾಹಿತಿ ಸಿಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಜಾಲತಾಣದಲ್ಲಿ ನಾಡಿನ ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ಜಾಹೀರಾತು ನೀಡುವ ಮೂಲಕ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಆದಾಯ ಮೂಲವನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಉಪಾಧ್ಯಾಯ ಅವರು ಸಿದ್ಧಿವಿನಾಯಕ ಸ್ತುತಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಎಸ್. ರಾವ್, ಕಾರ್ಯಾಧ್ಯಕ್ಷ ಮಂಜುನಾಥ್ ಕಾಮತ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಹಣಕಾಸು ಸಮಿತಿ ಸಂಚಾಲಕ ಸುರೇಶ್, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ಜಾಲತಾಣ ನಿರ್ಮಿಸಿದ ಬೆಂಗಳೂರಿನ ಧ್ಯೇಯಾ ಮೀಡಿಯಾ ಪ್ರೈ.ಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿನಾರಾಯಣ ಗುಣಾಜೆ ಜಾಲತಾಣದಲ್ಲಿರುವ ಮಾಹಿತಿಗಳ ವಿವರವನ್ನಿತ್ತರು. ಕಛೇರಿ ಸಮಿತಿ ಸಂಚಾಲಕ ಎ. ಮನೋಹರ್ ಅವರು ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಧನಂಜಯ ಮಧೂರು ವಂದನಾರ್ಪಣೆ ಮಾಡಿದರು.
വെബ്സൈറ്റ് പ്രകാശനം ചെയ്തു
മധൂർ ശ്രീ മദനന്ദേശ്വര സിദ്ധിവിനായക ക്ഷേത്ര അഷ്ട ബന്ധ ബ്രഹ്മകലശ മൂടപ്പസേവയോട് അനുബന്ധിച്ച് മധൂർ ക്ഷേത്ര വെബ്സൈറ്റ് പ്രകാശനം ചെയ്തു. വെബ്സൈറ്റിന്റെ ഉദ്ഘാടനം പ്രമുഖ വ്യവസായി മഹാബലേശ്വര ഭട്ട് നിർവഹിച്ചു. ക്ഷേത്ര മേൽശാന്തി ശ്രീകൃഷ്ണ ഉപാധ്യായ പ്രാർത്ഥന നടത്തി. ബ്രഹ്മകലശോത്സവ സമിതി അധ്യക്ഷൻ ഡോക്ടർ ബി എസ് റാവു, ജനറൽ സെക്രട്ടറി ജയദേവ് കണ്ഡിഗ,ഫൈനാൻസ് കമ്മിറ്റി കൺവീനർ സുരേഷ്, ക്ഷേത്രം എക്സിക്യൂട്ടീവ് ഓഫീസർ രാജേഷ് ടി തുടങ്ങിയവർ പരിപാടിയിൽ സംബന്ധിച്ചു.