
ಮಧೂರು ಬ್ರಹ್ಮಕಲಶೋತ್ಸವಕ್ಕೆ ಸ್ವರ್ಣಕಲಶ ರೂಪದಲ್ಲಿ 1 ಕೋಟಿ ರೂ ದೇಣಿಗೆ ನೀಡಿದ ಬಾಲಕೃಷ್ಣ ಗೌಡ ಹಾಗೂ ಕುನಾಲ್ ಬಾಲಕೃಷ್ಣ ಗೌಡ

ಬೆಂಗಳೂರು: ತಾ. 27 ಮಾರ್ಚ್ 2025ರಿಂದ 7 ಎಪ್ರಿಲ್ 2025ರ ವರೆಗೆ ನಡೆಯಲಿರುವ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು ಇದೀಗ ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಎಚ್. ಡಿ. ದೇವೇಗೌಡರ ಮಗನಾದ ಬಾಲಕೃಷ್ಣ ಗೌಡ ಹಾಗೂ ಮೊಮ್ಮಗನಾದ ಕುನಾಲ್ ಬಾಲಕೃಷ್ಣ ಗೌಡ ಶ್ರೀ ಕ್ಷೇತ್ರಕ್ಕೆ ಸ್ವರ್ಣ ಕಲಶ ರೂಪದಲ್ಲಿ ರೂ. 1 ಕೋಟಿ ದೇಣಿಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ 12 ದಿನಗಳ ಪರ್ಯಂತ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಾಯ ಸಹಕಾರಗಳ ಭರವಸೆಯನ್ನೂ ನೀಡಿದರು.